ಹಳೆ ಗಂಡನ ಪಾದವೇ ಗತಿ (Meaning /Explanation )in Kannada - Kannada gadegalu

 ಹಳೆ ಗಂಡನ ಪಾದವೇ ಗತಿ  Kannada gadegalu Or a proverb (Meaning /Explanation ) in Kannada. Hale gandana padave gathi.

ಹಳೆ ಗಂಡನ ಪಾದವೇ ಗತಿ (Meaning /Explanation )in Kannada - Kannada gadegalu

ಹಳೆ ಗಂಡನ ಪಾದವೇ ಗತಿ (Meaning /Explanation )in Kannada :

ಹಳೆ ಗಂಡನ ಪಾದವೇ ಗತಿ 

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.

ಕೆಲಸಗಾರ ತನ್ನ ಯಜಮಾನ ಬಹಳ ಕಷ್ಟ ಕೊಡುತ್ತಾನೆ , ಹೊತ್ತು ಗೊತ್ತು ಇಲ್ಲದೇ ದುಡಿಸಿಕೊಳ್ಳುತ್ತಾನೆ ಎಂದು ಭಾವಿಸಿ , ಬೇರೊಂದು ಕಡೆ ಕೆಲಸಕ್ಕೆ ಸೇರಿಕೊಳ್ಳುತ್ತಾನೆ . ಆದರೆ ಅಲ್ಲಿ ಅವನಿಗೆ ಇಲ್ಲಿಗಿಂತ ಹತ್ತು ಪಟ್ಟುಕಷ್ಟವಿರುವುದು ಸ್ವಲ್ಪ ದಿನಗಳಲ್ಲೇ ಅರಿವಾಗುತ್ತದೆ .

ಆಗ ಅವನ ಸ್ಥಿತಿ ಬಾಣಲೆಯಲ್ಲಿ ಬಿಸಿ ಎಂದು ಅದರಿಂದ ಮುಕ್ತಿ ಪಡೆಯಲು ಹೋಗಿ ಬೆಂಕಿಗೆ ಬಿದ್ದ ಹಾಗಾಗಿರುತ್ತದೆ .

ಹಾಗಾಗಿ ಈ ಹೊಸ ಯಜಮಾನನ ಬಳಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಮತ್ತೆ ಹಳೇ ಯಜಮಾನನೇ ವಾಸಿ ಎಂದು ಅವನ ಬಳಿ ಕೆಲಸ ಕೇಳಿಕೊಂಡು ಹೋಗುತ್ತಾನೆ .

ಅಂತವರ ಸ್ಥಿತಿಯನ್ನು ಈ ಗಾದೆ ವಿವರಿಸುತ್ತದೆ . ಕಷ್ಟಗಳು ಎಲ್ಲಿ ಹೋದರೂ ತಪ್ಪುವುದಿಲ್ಲ , ನಾವು ಸ್ಥಳ ಬದಲಾಯಿಸಿದ ಮಾತ್ರಕ್ಕೆ ಸಮಸ್ಯೆಗಳಿಂದ ಮುಕ್ತರಾದೆವು ಎಂದಲ್ಲ , ಅಲ್ಲಿ ಮತ್ತೊಂದಿಷ್ಟು ಹೊಸ ಸಮಸ್ಯೆಗಳು ಎದುರಾಗುತ್ತವೆ .

ಆದ್ದರಿಂದ ಇರುವುದರಲ್ಲೇ ಹೊಂದಿಕೊಂಡು , ಕಷ್ಟಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾ ಹೋಗುವುದು ಉತ್ತಮ . ಇಲ್ಲವಾದರೆ ನಾವು ಎಲ್ಲರ ಬಾಯಿಗೆ ಆಹಾರವಾಗಬೇಕಾಗುತ್ತದೆ .

Post a Comment

1 Comments

  1. The blue dice dictates the horizontal end result, and the gold dice dictates the vertical. During the game, players will in a position to|be capable of|have the ability to} multiply their bets a lot as} 20,000x for the 카지노 사이트 chance to win a max prize of €500,000. Introducing a brand-new highly anticipated Live Casino game show with revolutionary mechanics the place players can bet on the numbers or the bonus squares that may land from two rolled dice.

    ReplyDelete