ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ Kannada gadegalu Or a proverb (Meaning /Explanation ) in Kannada. Kumbala kai kalla yendare hegalu mutti nodikanda.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ (Meaning /Explanation )in Kannada :
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ
ತಪ್ಪು ಮಾಡಿದವನು , ಅಪರಾಧಿ ಮನೋಭಾವ ಉಳ್ಳವನು ಜಗತ್ತಿನಲ್ಲಿ ಎಂದೂ ಶಾಂತಿಯಿಂದ ಇರುವುದಿಲ್ಲ .
ತನ್ನ ಕೆಟ್ಟ ಕೆಲಸಗಳಿಂದ ಎದುರಿಸಬೇಕಾದ ದುರ್ಭರ ಪರಿಸ್ಥಿತಿಯಿಂದಾಗಿ ಹೆದರುತ್ತಿರುತ್ತಾನೆ ಎಂಬುದನ್ನು ಈ ಗಾದೆ ಹೇಳುತ್ತದೆ . ಕುಂಬಳಕಾಯಿ ಕದ್ದ ಕಳ್ಳ ಅದನ್ನು ಹೆಗಲ ಮೇಲಿಟ್ಟು ಹೊತ್ತೊಯ್ದಿರುತ್ತಾನೆ .
ಯಾರಾದರೂ ಕಳ್ಳ ಎಂಬ ಶಬ್ದ ಹೇಳಿದ್ದನ್ನು ಕೇಳಿದರೂ ಸಾಕು , ಅವನು ಮೊದಲು ತನ್ನ ಹೆಗಲನ್ನು ಮುಟ್ಟಿಕೊಂಡು ನೋಡಿಕೊಳ್ಳುತ್ತಾನೆ.ಆ ಅಪರಾಧಿ ಪ್ರಜ್ಞೆ ಅವನಿಗರಿವಿಲ್ಲದಂತೆ ಅದನ್ನು ಮಾಡಿಸುತ್ತದೆ .
ಕೊಲೆ , ಕಳ್ಳತನ , ದರೋಡೆ , ಸುಲಿಗೆ ಮಾಡಿದವರಿಗೆ ಪೋಲಿಸರ ಭಯವಿರುತ್ತದೆ . ಒಂದಲ್ಲ ಒಂದು ದಿನ ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆಂದು ನಡುಗುತ್ತಿರುತ್ತಾರೆ . ಯಾವಾಗಲೂ ಯಾರೇ ತಪ್ಪು . ಮಾಡಿದರೂ ಅವರಲ್ಲಿ ಒಂದು ಅಪರಾಧಿ ಮನೋಭಾವ ಕಾಡುತ್ತಿರುತ್ತದೆ .
ಸಮಾಜದ ಎದುರಿಗೆ ಕಾಣಿಸಿಕೊಳ್ಳಲು ಹೆದರುತ್ತಾರೆ . ಈ ವಿಶ್ವದಲ್ಲಿ ಗೌರವಯುತವಾಗಿ ಬಾಳ್ವೆ ನಡೆಸಬೇಕೆಂದು ಇಷ್ಟಪಡುವವರು ಅಪರಾಧ ಮಾಡಬಾರದು . ತನ್ನ ಮನಸ್ಸಾಕ್ಷಿಗೆ ವಿರುದ್ದವಾಗಿ ಹೋಗಬಾರದು .
ಏಕೆಂದರೆ ಅಪರಾಧ ಮಾಡಿದವನು ಶಾಂತಿಯಿಂದ ಬಾಳುವೆ ಮಾಡಲಾರ ಎಂಬುದನ್ನು ಈ ಗಾದೆ ತಿಳಿಸುತ್ತದೆ .

0 Comments