ಹಾಸಿಗೆ ಇದ್ದಷ್ಟು ಕಾಲು ಚಾಚು Kannada gadegalu Or a proverb (Meaning /Explanation ) in Kannada. Hasige edastu kaalu chaachu.
ಹಾಸಿಗೆ ಇದ್ದಷ್ಟು ಕಾಲು ಚಾಚು (Meaning /Explanation )in Kannada :
ಹಾಸಿಗೆ ಇದ್ದಷ್ಟು ಕಾಲು ಚಾಚು
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
Example - 1. ಮೇಲಿನ ಗಾದೆ ಮಾತು ಜೀವನದ ಇತಿಮಿತಿಯನ್ನು ಸೂಚಿಸುತ್ತದೆ. ಹಾಸಿಗೆಯ ಅಳತೆಗೆ ತಕ್ಕಂತೆ ಕಾಲು ಚಾಚಿ ಮಲಗಬೇಕು .ಇಲ್ಲವಾದರೆ ಕಾಲು ಹಾಸಿಗೆಯಿಂದ ಆಚೆ ಬಂದು ನೆಲ ಮುಟ್ಟಿ ಶೀತ ಬಾಧೆ ಬಂದೀತು .
ಹಾಗಾಗಿ ಹಾಸಿಗೆ ಅಷ್ಟು ಉದ್ದವಿಲ್ಲದಿದ್ದರೆ ,ಮೊಟಕಾಗಿದ್ದರೆ ಕಾಲನ್ನು ಮಡಚಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಮಿತಿಯನ್ನು ಅರಿತು ಬಾಳಬೇಕು.
ಹಾಗಾಗಿ ಹಾಸಿಗೆ ಅಷ್ಟು ಉದ್ದವಿಲ್ಲದಿದ್ದರೆ ,ಮೊಟಕಾಗಿದ್ದರೆ ಕಾಲನ್ನು ಮಡಚಿಕೊಳ್ಳುತ್ತೇವೆ. ಹಾಗೆಯೇ ನಮ್ಮ ಮಿತಿಯನ್ನು ಅರಿತು ಬಾಳಬೇಕು.
ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಮ್ಮ ಶಕ್ತಿ,ಸಾಮರ್ಥ್ಯ ,ಸೌಕರ್ಯಗಳನ್ನು ಗಮನಿಸಬೇಕು. ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಸಾಲ ಮಾಡಿ ತುಪ್ಪ ತಿನ್ನುವ ಜಾಯಮಾನ ನಮ್ಮದಾಗಬಾರದು. ನಮ್ಮ ಆದಾಯಕ್ಕೆ ತಕ್ಕ ಹಾಗೆ ಖರ್ಚು ಮಾಡಬೇಕು. ಆದಾಯ ಕಡಿಮೆ ಖರ್ಚು ಅತಿಯಾದರೆ ಜೀವನದಲ್ಲಿ ನಾವೇ ಸಂಕಟಪಡಬೇಕಾಗುತ್ತದೆ. ದುಃಖ ,ಗೊಂದಲ ನಮ್ಮನ್ನು ಅವಲಂಬಿಸಿರುವವರಿಗೂ ಸಮಸ್ಯೆಗಳುಂಟಾಗುತ್ತವೆ.
ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ; ಆಸೆಯ ನಾಶವೇ ಸಂತೋಷದ ಮೂಲವಾಗಿದೆ. ಆದ್ದರಿಂದ ಇರುವುದರಲ್ಲಿ ತೃಪ್ತಿಕರವಾದ ,ಆರೋಗ್ಯಕರವಾದ ಜೀವನವನ್ನು ನಡೆಸಬೇಕು. ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.
ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ; ಆಸೆಯ ನಾಶವೇ ಸಂತೋಷದ ಮೂಲವಾಗಿದೆ. ಆದ್ದರಿಂದ ಇರುವುದರಲ್ಲಿ ತೃಪ್ತಿಕರವಾದ ,ಆರೋಗ್ಯಕರವಾದ ಜೀವನವನ್ನು ನಡೆಸಬೇಕು. ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.
Example - 2. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಿತಿಯನ್ನು ಅರಿತು ಬಾಳು ಎಂಬ ಉಪದೇಶವನ್ನು ನೀಡುತ್ತಿದೆ . ಆಸೆಯೇ ದುಃಖಕ್ಕೆ ಕಾರಣ ಎನ್ನುವ ಮಾತು ಆಸೆಯೇ ಪ್ರಗತಿಗೆ ಮೂಲ ಎನ್ನುವ ಮಾತು ನಾವು ಕೇಳಿದ್ದೇವೆ . ಇವೆರಡು ಪರಸ್ಪರ ವಿರುದ್ಧವಾಗಿ ಕಂಡರೂ ಈ ಎರಡನ್ನೂ ಹೊಂದಿಸಿ , ಆಸೆಯಿರಬೇಕು . ಆಸೆಗೆ ಮಿತಿಯಿರಬೇಕು ಎಂದು ಹೇಳಬಹುದು .
ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೂ ನಮ್ಮ ಶಕ್ತಿ ಮೀರಿ ಕೈ ಚಾಚುವುದಕ್ಕೆ ಹೋದರೆ ಅಪಾಯ ತೊಂದರೆ ತಪ್ಪಿದ್ದಲ್ಲ .
ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೂ ನಮ್ಮ ಶಕ್ತಿ ಮೀರಿ ಕೈ ಚಾಚುವುದಕ್ಕೆ ಹೋದರೆ ಅಪಾಯ ತೊಂದರೆ ತಪ್ಪಿದ್ದಲ್ಲ .
ಒಬ್ಬ ಬಡವ ತನ್ನ ಹೊಲಗದ್ದೆ ಮನೆ ಎಲ್ಲವನ್ನೂ ಮಾರಿ ಸಂಭ್ರಮದಿಂದ ತನ್ನ ಮಗಳ ಮದುವೆ ಮಾಡಲು ಸಿದ್ಧನಿದ್ದ . ಅವನ ಹಿತೈಷಿಯೊಬ್ಬನು ಹೀಗೆಲ್ಲಾ ಮಾಡಬೇಡ ಇದ್ದುದನ್ನೆಲ್ಲಾ ಮಾರಿ ಮದುವೆ ಮಾಡಬೇಡ .
ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೇ ಖರ್ಚು ಮಾಡು ಶಕ್ತಿ ಮೀರಿ ಖರ್ಚು ಮಾಡಬೇಡ . ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹಿತನುಡಿದನು , ಹಾಗೆಯೇ ಸಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಾರ . ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ .
ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೇ ಖರ್ಚು ಮಾಡು ಶಕ್ತಿ ಮೀರಿ ಖರ್ಚು ಮಾಡಬೇಡ . ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹಿತನುಡಿದನು , ಹಾಗೆಯೇ ಸಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಾರ . ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ .
Example - 3. ಮನುಷ್ಯನಿಗೆ ಜೀವನದಲ್ಲಿ ಆತ್ಮ ತೃಪ್ತಿ ಇರಬೇಕು . ಅತೃಪ್ತಿ ಮನುಷ್ಯನ ಸಂತೋಷ ನಮ್ಮದಿಗಳನ್ನು ಹಾಳು ಮಾಡುತ್ತದೆ . ತೃಪ್ತಿ ಇಲ್ಲದವರಿಗೆ ಎಷ್ಟು ಇದರೂ ಸಾಲದು ಎನಿಸುತ್ತದೆ . ಅವರ ಜೀವ ಅಸಂತೃಪ್ತಿಯಲೇ ಕೊನೆಗೊಳ್ಳುತ್ತದೆ .
ಹಾಸಿಗೆ ಇಲ್ಲಿ ನಮ್ಮ ಆವಶ್ಯಕತೆಗಳ ಪ್ರತೀಕವಾದರ ಕಾಲು ಚಾಚುವಿಕೆ ಸಂತೃಪ್ತಿಯನ್ನು ಸೂಚಿಸುತ್ತದೆ . ಹಾಸಿಗೆ ಮೀರಿ ಕಾಲು ಚಾಚಿದರೆ ನಮ್ಮದಿಯಿಂದ ನಿದ್ದೆ ಮಾಡುವುದು ಸಾಧ್ಯವಿಲ್ಲ .
ನನ್ನ ಸೀಮಿತ ತೋಳಲ್ಲಿ ಆದಾಯಕ್ಕೆ ಸರಿಹೊಂದುವಂತೆ ಬಾಳಬೇಕು . ಇಲ್ಲವಾದರೆ ಸಾಲದ ಕೂಪಕ್ಕೆ ಸಿಕ್ಕಿ ತೊಳಲಾಟಕ್ಕೆ ಗುರಿಯಾಗ ಬೇಕಾಗುತ್ತದೆ ಎಂಬುದನ್ನು ಈ ಗಾದೆ .

Suggested Kannada gadegalu :
1 Comments
Wow so, much money
ReplyDeleteWhat is this phone 📱no this is not fair please down the price we will that mobile phone this is my i phone cost 100999