ಮನಸ್ಸಿದ್ದರೆ ಮಾರ್ಗವಿದೆ  (Meaning /Explanation )in Kannada - Kannada gadegalu

 ಮನಸ್ಸಿದ್ದರೆ ಮಾರ್ಗವಿದೆ  Kannada gadegalu Or a proverb (Meaning /Explanation ) in Kannada. Manasidare margavide.

ಮನಸ್ಸಿದ್ದರೆ ಮಾರ್ಗವಿದೆ  (Meaning /Explanation )in Kannada - Kannada gadegalu

ಮನಸ್ಸಿದ್ದರೆ ಮಾರ್ಗವಿದೆ  (Meaning /Explanation )in Kannada :

ಮನಸ್ಸಿದ್ದರೆ ಮಾರ್ಗವಿದೆ

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.

Example 1 : ಸಾಮರ್ಥ್ಯ ಮತ್ತು ಪ್ರಯತ್ನಗಳು ಜೋಡೆತ್ತಿನಂತೆ ಒಟ್ಟಿಗೆ ಸಾಗಿದರೆ , ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿ . ಸಾಮರ್ಥ್ಯದ ಜೊತೆಗೆ ಕೆಲಸ ಮಾಡುವ ಮನಸ್ಸು ಬಹು ಮುಖ್ಯ .

ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾರ್ಗ ತನಗೆ ತಾನೇ ಲಭ್ಯ . ಸಾಮರ್ಥ್ಯವು ಎಷ್ಟೇ ಇದ್ದರೂ , ಸರಿಯಾದ ಪ್ರಯತ್ನವಿಲ್ಲದಿದ್ದರೆ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ ,

ಶಿವ ಕೊಟ್ಟ ಜೋಳಿಗೆ ಗೂಟಕ್ಕೆ ನೇತುಹಾಕಿದರೆ , ಜೋಳಿಗೆ ತುಂಬಲು ಸಾಧ್ಯವಿಲ್ಲ ಬದಲಾಗಿ ಮನೆ ಮನೆ ಅಲೆದು ಭಿಕ್ಷೆ ಬೇಡಿದಾಗ ಮಾತ್ರ ಅದು ತುಂಬುತ್ತದೆ .

ಹಾಗೆಯೇ , ಬಾಯಲ್ಲಿ ನಾನು ಒಳ್ಳೆ ಅಂಕ ತೆಗೆಯಬೇಕು , ಮುಂದೆ ಡಾಕ್ಟರ್ ಆಗಬೇಕು , ಜನಸೇವೆ ಮಾಡಬೇಕು , ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಬೇಕು ಎಂದು ಹೇಳಿಕೊಂಡು ತಿರುಗಿದರೆ ಅಂದುಕೊಂಡಿದ್ದನ್ನು ಸಾಧಿ ಸಲು ಸಾಧ್ಯವಾಗುವುದಿಲ್ಲ ,

ಅದಕ್ಕಾಗಿ ಮೊದಲು ಮನಸ್ಸು ಮಾಡಬೇಕು . ನಾನು ಇಂದಿನಿಂದಲೇ ಓದಲು ಆರಂಭಿಸಬೇಕೆಂದು ಮನದಲ್ಲಿ ದೃಢ ಸಂಕಲ್ಪ ಮಾಡಿ , ಅದರಂತೆ ನಡೆಯಬೇಕು .

ಆಗ ಮಾತ್ರ ಅಂದುಕೊಂಡಿದ್ದನ್ನು ಸುಲಭವಾಗಿ ಸಾಧಿ ಸಲು ಸಾಧ್ಯ ಎಂದು ಈ ಗಾದೆ ಹೇಳುತ್ತದೆ .

Example 2 : ನಾವು ಯಾವುದೇ ಒಂದು ಕೆಲಸವನ್ನು ಸರಿಯಾಗಿ ಮಾಡಲು ಆಸಕ್ತಿ ಇರಬೇಕು. ಹಾಗೆ ಆಸಕ್ತಿ ಮೂಡಲು ಆ ಕೆಲಸದ ಬಗ್ಗೆ ನಮಗೆ ಪ್ರೀತಿ ಇರಬೇಕು.

ಹಾಗೆ ಆ ಕೆಲಸದಲ್ಲಿ ಪ್ರೀತಿ ಇದ್ದಾಗ ಸಹಜವಾಗಿಯೇ ಆ ಕೆಲಸ ಯಶಸ್ವಿಯಾಗುತ್ತದೆ. ಒಂದು ಚಿತ್ರ ಗೀತೆಯ ಸಾಲು ಹೀಗಿದೆ-‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’

ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಬದಲಾಗಿ ಮಾಡಿಯೇ ತಿರುತ್ತೇನೆ ಎಂದು ಮನಸ್ಸು ಮಾಡಿದರೇ ಎಂಥ ಕೆಲಸವಾದರೂ ಮಾಡಲು ಸಾಧ್ಯ ಎಂದು ಈ ಗಾದೆ ಸೂಚಿಸುತ್ತದೆ.

Post a Comment

4 Comments