ತೊಟ್ಟಿಲ ತೂಗುವ ಕೈ ದೇಶವನ್ನು ಆಳಬಲ್ಲದು (Meaning /Explanation )in Kannada - Kannada gadegalu

 ತೊಟ್ಟಿಲ ತೂಗುವ ಕೈ ದೇಶವನ್ನು ಆಳಬಲ್ಲದು Kannada gadegalu Or a proverb (Meaning /Explanation ) in Kannada. Thottilu thuguva kai deshavannu alabahudu.

ತೊಟ್ಟಿಲ ತೂಗುವ ಕೈ ದೇಶವನ್ನು ಆಳಬಲ್ಲದು (Meaning /Explanation )in Kannada - Kannada gadegalu

ತೊಟ್ಟಿಲ ತೂಗುವ ಕೈ ದೇಶವನ್ನು ಆಳಬಲ್ಲದು (Meaning /Explanation )in Kannada :

ತೊಟ್ಟಿಲ ತೂಗುವ ಕೈ ದೇಶವನ್ನು ಆಳಬಲ್ಲದು

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.

ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ . ಮೊದಲೆಲ್ಲ ಎಷ್ಟೇ ಪ್ರಬಲಳಾಗಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಇರಬೇಕಾಗಿತ್ತು ಮಕ್ಕಳನ್ನು ಪೋಷಿಸಿ , ಅವರಿಗೆ ಮೊದಲ ಗುರುವಾಗಿ ಒಳ್ಳೆಯ ಶಿಕ್ಷಣವನ್ನು ಕೊಡುತ್ತಿದ್ದಳು .

ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿ ಶಿವಾಜಿಯನ್ನು ಮರಾಠ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಲು ಶ್ರಮಿಸಿದಳು . ವಿದ್ಯಾವತಿ ಮಗ ಭಗತ್‌ಸಿಂಗ್‌ರಿಗೆ ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಿದರು .

ಇಂತ ಬುದ್ಧಿವಂತ ತಾಯಿಯರಿದ್ದ ಕಾರಣದಿಂದಲೇ ದೇಶ ಇಂಥ ಪ್ರತಿಮ ನಾಯಕರನ್ನು ಕಾಣಲು ಸಾಧ್ಯವಾಯಿತು . ಆದರೆ ಇಂದಿನ ಸ್ಥಿತಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ .

ಬದಲಾಗಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ವಿಶೇಷ ಕೊಡುಗೆ ನೀಡುತ್ತಿದ್ದಾರೆ ಶ್ರೀಮತಿ ಇಂದಿರಾ ಗಾಂಧಿ , ಕಿರಣ್ ಬೇಡಿ, ಕಲ್ಪನಾ ಚಾವ್ ಮುಂತಾದರು ಉದಾಹರಣೆಯಾಗಿ ನಿಲ್ಲುತ್ತಾರೆ.



Post a Comment

0 Comments