ಉಪದೇಶಕ್ಕಿಂತ ಉದಾಹರಣೆ ಲೇಸು (Meaning /Explanation )in Kannada - Kannada gadegalu

ಉಪದೇಶಕ್ಕಿಂತ ಉದಾಹರಣೆ ಲೇಸು Kannada gadegalu Or a proverb (Meaning /Explanation ) in Kannada. Upadeshakintha udaharane lesu.

ಉಪದೇಶಕ್ಕಿಂತ ಉದಾಹರಣೆ ಲೇಸು (Meaning /Explanation )in Kannada - Kannada gadegalu

ಉಪದೇಶಕ್ಕಿಂತ ಉದಾಹರಣೆ ಲೇಸು (Meaning /Explanation )in Kannada :

ಉಪದೇಶಕ್ಕಿಂತ ಉದಾಹರಣೆ ಲೇಸು

ಲೋಕದ ಡೊಂಕ ನೀವೇಕೆ ತಿದ್ದುವಿರಿ , ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದು ಹೇಳಿದರು ವಿಶ್ವಬಂಧು ಬಸವಣ್ಣ ಈ ಜಗತ್ತಿನ ತುಂಬ ಉಪದೇಶ ಮಾಡುವವರೇ ಹೆಚ್ಚು ಇದ್ದಾರೆ .

ಅವರು ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸಿ , ಉಪದೇಶ ಮಾಡುತ್ತಾರೆ . ಆದರೆ ಸ್ವತಃ ತಾವೇ ತಪ್ಪು ಮಾಡುತ್ತಿರುತ್ತಾರೆ . ಅಂತವರಿಗೆ ಯಾರೂ ಗೌರವ ನೀಡುವುದಿಲ್ಲ , ಉಪದೇಶ ಮಾಡುವವರು ಹೇಳಿದಂತೆ ನಡೆದುಕೊಳ್ಳಬೇಕು .

ಮೊದಲು ತಮ್ಮ ದೋಷಗಳನ್ನು ಸರಿಪಡಿಸಿಕೊಂಡು ಆಮೇಲೆ ಇತರರಿಗೆ ಉಪದೇಶ ಮಾಡಬೇಕು . ನುಡಿದಂತೆ ನಡೆದವರು ಮಹಾತ್ಮರೆನಿಸಿಕೊಳ್ಳುತ್ತಾರೆ . ಸತ್ಯಕ್ಕೆ ಹೆಸರಾದವನು ರಾಜಾ ಸತ್ಯ ಹರಿಶ್ಚಂದ್ರ , ಅವನಿನ್ನು ಜನಮಾನಸದಲ್ಲಿ ನೆನಪಿನಲ್ಲುಳಿದಿದ್ದಾನೆ .

 ಕಾರಣ , ಜೀವನದ ಅತಿ ಕಷ್ಟದ ಸಂದರ್ಭದಲ್ಲೂ ಸತ್ಯವನ್ನೇ ನುಡಿದ . ಹೀಗೆ ಸಮಾಜದಲ್ಲಿ ಯಾರೇ ಆದರ್ಶವ್ಯಕ್ತಿ ಅನಿಸಿಕೊಳ್ಳಬೇಕಾದರೆ ತಾವು ಇನ್ನೊಬ್ಬರಿಗೆ ಉದಾಹರಣೆಯಾಗಬೇಕು . ಏನನ್ನು ಹೇಳುತ್ತಾರೆ ಅದನ್ನು ಮೊದಲು ತಾವು ಮಾಡಿ ತೋರಿಸಬೇಕು . ನಂತರ ಉಪದೇಶಿಸಬೇಕೆಂಬುದನ್ನು ಈ ಗಾದೆ ಹೇಳುತ್ತದೆ.

Post a Comment

0 Comments