ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ? - Kannada Gadegalu - Kannada stories

 ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ? - Kannada Gadegalu

This is a new Kannada proverb called ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ? With full meaning and explanation of the Kopadalli koydukonda mugu santaviddaga bandite? In Kannada.

ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ? - Kannada Gadegalu - Kannada stories

ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ?  Meaning and explanation :

ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ ?

ಕೋಪ ಮನುಷ್ಯನ ಶತ್ರು , ಯಾರಿಗೆ ಆಗಲಿ ಯಾವುದಾದರೂ ಸಂದರ್ಭ ದಲ್ಲಿ ಕೋಪ ಬಂದೇ ಬರುತ್ತದೆ . ಕೋಪ ಒಂದು ಅನರ್ಥ ಸಾಧನ .

ಕೆಲವರು ಮಾತು ಮಾತಿಗೆ ಕೋಪ ಮಾಡಿಕೊಳ್ಳುತ್ತಾರೆ . ಯಜಮಾನ ಆಳುಗಳ ಮೇಲೂ , ಗಂಡ ಹೆಂಡತಿ - ಮಕ್ಕಳ ಮೇಲೂ , ಶಿಕ್ಷಕರು ಮಕ್ಕಳ ಮೇಲೂ ಕೋಪಿಸಿಕೊಳ್ಳು ವುದು ಸಾಮಾನ್ಯ . ಕೋಪ ಬಂದರೂ ಅದನ್ನು ಪ್ರದರ್ಶಿಸದೇ ವಿವೇಕದಿಂದ ವರ್ತಿಸುವವರು ಇದ್ದಾರೆ . ವಿವೇಕಿ ಕೋಪವನ್ನು ತಡೆದುಕೊಳ್ಳಬಲ್ಲ ಕೋಪದ ಕೈಗೆ ಬುದ್ದಿ ಕೊಡುವ ಮನುಷ್ಯ ಆ ವೇಳೆಯಲ್ಲಿ ಏನು ಬೇಕಾದರೂ ಮಾಡುತ್ತಾನೆ .

ತನಗಷ್ಟೇ ಅಲ್ಲದೆ ಇತರರಿಗೂ ಹಾನಿ ಮಾಡುತ್ತಾನೆ . ಆದರೆ ಕೋಪ ಕಡಿಮೆಯಾದಾಗ ಮಾಡಿದ ಹಾನಿ ಯನ್ನು ಸರಿಮಾಡಲು ಸಾಧ್ಯವಿಲ್ಲ. ಒಂದು ನಿಮಿಷದ ಸಿಟ್ಟಿನ ಭರದಲ್ಲಿ ಕೈಗೆ ಸಿಕ್ಕ ವಸ್ತುವನ್ನು ಪುಡಿ ಮಾಡುತ್ತಾರೆ . ಆದರೆ ಶಾಂತ ವಾದಾಗ ಅದನ್ನು ಸರಿ ಮಾಡಲು ಬರುವುದಿಲ್ಲ , ಆಮೇಲೆ ಪಶ್ಚಾತ್ತಾಪ ಪಟ್ಟರೂ ಅದರಿಂದ ಏನೂ ಪ್ರಯೋಜನವಿಲ್ಲ , ಆದ್ದರಿಂದ ಕೋಪಗೊಳ್ಳುವ ಮೊದಲು ಇದನ್ನೆಲ್ಲ ಯೋಚಿಸುವುದು ಸೂಕ್ತ . ಇಲ್ಲವಾದಲ್ಲಿ ಕೋಪವನ್ನು ತಡೆದು ಕೊಳ್ಳುವುದು ಅಥವಾ ಕೋಪ ಮಾಡಿಕೊಳ್ಳದೇ ಎಲ್ಲವನ್ನೂ  ಸರಿ ಮಾಡಬೇಕು.

Post a Comment

0 Comments