ಸಗಣಿಯೊಂದಿಗಿನ ಸರಸಕ್ಕಿಂತ ಗಂಧದೊಂದಿಗಿನ ಗುದ್ದಾಟ ಲೇಸು Kannada gadegalu or proverb Meaning and explanation in Kannada Saganiyondina Sarasakintha gadhadondigina Gudhata Lesu.
ಸಗಣಿಯೊಂದಿಗಿನ ಸರಸಕ್ಕಿಂತ ಗಂಧದೊಂದಿಗಿನ ಗುದ್ದಾಟ ಲೇಸು (Meaning /Explanation )in Kannada
ಸಗಣಿಯೊಂದಿಗಿನ ಸರಸಕ್ಕಿಂತ ಗಂಧದೊಂದಿಗಿನ ಗುದ್ದಾಟ ಲೇಸು
ಸಗಣಿಯಿಂದ ಎಷ್ಟೇ ಉಪಯೋಗವಿದ್ದರೂ ಸಗಣಿ ಸಗಣಿಯೇ . ಅದನ್ನು ನೋಡಲು ಅಸಹ್ಯವೆನಿಸುತ್ತದೆ , ವಾಸನೆ ಬರುತ್ತದೆ . ಇದು ವಾಸ್ತವ . ಗಂಧವೆಂದರೆ ಪರಿಮಳ , ಗಂಧ ಶ್ರೇಷ್ಟ ಮತ್ತು ಅತ್ಯಂತ ಬೆಲೆಬಾಳುವಂತದ್ದು . ಆದ್ದರಿಂದ ಗಂಧದೊಡನೆ ಗುದ್ದಾಡಿದರೂ ಅದು ಹಿತವೇ . ಏಕೆಂದರೆ ನಮ್ಮ ಮೈಗೆ ಗಂಧದ ಸ್ಪರ್ಶವಾಗುತ್ತದೆ . ಸುವಾಸನೆ ಬೀರುತ್ತದೆ .
ಅದೇ ರೀತಿ ನಾವು ಸಜ್ಜನರೊಂದಿಗೆ ಗುದ್ದಾಡಿದರೂ ಅಂದರೆ ವಾದ ಮಾಡಿದರೂ ಅದರಿಂದ ನಮಗೆ ಒಳ್ಳೆಯದೇ ಆಗುತ್ತದೆ ವಿನಃ ಕೆಡುಕಾಗುವುದಿಲ್ಲ , ಬಲ್ಲವರೊಂದಿಗೆ ವಾದ ಮಾಡಿದಾಗ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ .
ಅದೇ ದುಷ್ಟರೊಂದಿಗೆ ಎಷ್ಟೇ ಉತ್ತಮ ಒಡನಾಟ , ಸ್ನೇಹ ಇಟ್ಟುಕೊಂಡರೂ ನಮಗೆ ಒಂದಲ್ಲ ಒಂದು ದಿನ ಕೆಡಕು ತಪ್ಪಿದ್ದಲ್ಲ . ಜೊತೆಗೆ ಅಂತಹವರ ಸಹವಾಸ ಮಾಡಿದ್ದಕ್ಕೆ ನಮ್ಮ ವ್ಯಕ್ತಿತ್ವಕ್ಕೂ ಕಳಂಕ ಬರುತ್ತದೆ .
ಆದ್ದರಿಂದ ಸಗಣಿ ಅಂದರೆ ಕೆಟ್ಟ ಜನಗಳ ಸ್ನೇಹಕ್ಕಿಂತ ಗಂಧ ಅಂದರೆ ಒಳ್ಳೆಯವರ ಜೊತೆಗಿನ ವಾದವೇ ಉತ್ತಮ ಎಂಬುದನ್ನು ಈ ಗಾದೆ ಹೇಳುತ್ತದೆ .

Check out more Kannada gadegalu meaning and explanation in Kannada at Kannadastories.in
0 Comments