ಕನ್ನಡಿಯೊಳಗಿನ ಗಂಟಿಗಿಂತ ಕೈಯೊಳಗಿನ ಗಂಟೇ ಲೇಸು (Meaning /Explanation )in Kannada - Kannada gadegalu

 ಕನ್ನಡಿಯೊಳಗಿನ ಗಂಟಿಗಿಂತ ಕೈಯೊಳಗಿನ ಗಂಟೇ ಲೇಸು Kannada gadegalu or proverb 
(Meaning /Explanation )in Kannada. Kannadiyolagina gontigintha kaiyolagina gante lesu. 

ಕನ್ನಡಿಯೊಳಗಿನ ಗಂಟಿಗಿಂತ ಕೈಯೊಳಗಿನ ಗಂಟೇ ಲೇಸು (Meaning /Explanation )in Kannada - Kannada gadegalu

ಕನ್ನಡಿಯೊಳಗಿನ ಗಂಟಿಗಿಂತ ಕೈಯೊಳಗಿನ ಗಂಟೇ ಲೇಸು (Meaning /Explanation )in Kannada : 

ಕನ್ನಡಿಯೊಳಗಿನ ಗಂಟಿಗಿಂತ ಕೈಯೊಳಗಿನ ಗಂಟೇ ಲೇಸು

ಕನ್ನಡಿಯಲ್ಲಿ ಕಾಣುವ ವಸ್ತು ಎಷ್ಟೇ ಚೆನ್ನಾಗಿದ್ದರೂ ಅದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಏನಿದ್ದರೂ ನಮ್ಮ ಬಳಿ ಇರುವ ವಸ್ತುವನ್ನೇ ನೋಡಿ ಖುಷಿಪಡಬೇಕು . ಬದಲಾಗಿ ಅದಕ್ಕಿಂತ ಚೆಂದದ ವಸ್ತು ಕಾಣಿಸಿತೆಂದು ಕೈ ಚಾಚಿದರೆ ಇದ್ದದ್ದನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಈ ಗಾದೆ ಹೇಳುತ್ತದೆ .

ಬೇಟೆಗಾರನೊಬ್ಬ ಹಕ್ಕಿಯೊಂದನ್ನು ಹಿಡಿದಿದ್ದ ಆ ತಕ್ಷಣಕ್ಕೆ ಅಲ್ಲೇ ಪಕ್ಕದಲ್ಲಿ ಮತ್ತೆರಡು ಹಕ್ಕಿಗಳು ಕಾಣಿಸಿದವು . ಇದಾದರೆ ಒಂದೇ ಹಕ್ಕಿ ಅವನ್ನು ಬೇಟೆಯಾಡಿದರೆ ಒಂದೇ ಬಾರಿಗೆ ಎರಡು ಹಕ್ಕಿಗಳು ಸಿಗುತ್ತವೆ ಎಂದು ದುರಾಸೆ ಪಟ್ಟು ಕಷ್ಟಪಟ್ಟುಹಿಡಿದ ಹಕ್ಕಿಯನ್ನು ಬಿಟ್ಟು , ಆ ಹಕ್ಕಿಗಳನ್ನು ಹಿಡಿಯಲು ಹೋದ . ಅವನ ದುರದೃಷ್ಟಕ್ಕೆ ಆ ಹಕ್ಕಿಗಳು ತಪ್ಪಿಸಿಕೊಂಡು ಹಾರಿಹೋದವು .

ಕೆಲವರು ಹೀಗೆ ತಮ್ಮ ಬಳಿ ಇರುವ ವಸ್ತುಗಳಲ್ಲಿ ತೃಪ್ತಿಪಡುವುದನ್ನು ಬಿಟ್ಟು ಬೇರೆಯವರ ವಸ್ತುಗಳಿಗೆ ಆಸೆ ಪಡುತ್ತಾರೆ . ಅದು ಅವರ ಪಾಲಿಗೆ ಕನ್ನಡಿಯೊಳಗಿನ ಗಂಟೇ ಸರಿ , ಅದು ಸಿಗುವುದಿಲ್ಲ ಬದಲಾಗಿ ನಿರಾಶೆಯಾಗುತ್ತದೆ . ಆದ್ದರಿಂದ ಇದ್ದುದರಲ್ಲೇ ತೃಪ್ತಿ ಪಡುವುದನ್ನು ಕಲಿಯಬೇಕು .

Check out more Kannada gadegalu or proverb 
(Meaning /Explanation )in Kannada at kannadastories.in

Post a Comment

0 Comments