ಉದ್ದು ಮದ್ದನ್ನು ಕೆಡಿಸಿತು Kannada gadegalu Or a proverb (Meaning /Explanation ) in Kannada. Uddhu maddanu kedisithu.
ಉದ್ದು ಮದ್ದನ್ನು ಕೆಡಿಸಿತು (Meaning /Explanation )in Kannada :
ಉದ್ದು ಮದ್ದನ್ನು ಕೆಡಿಸಿತು
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
ಪಥ್ಯದಲ್ಲಿರುವವರು ಉದ್ದನ್ನು ತಿನ್ನುವುದಿಲ್ಲ , ಕಾರಣ , ಅದರಿಂದ ಕಾಯಿಲೆ ಹೆಚ್ಚಾಗುತ್ತದೆ .
ಆದ್ದರಿಂದ ಪಥ್ಯ ಮಾಡುತ್ತಿರುವವರಿಗೆ ಉದ್ದನ್ನು ತಿನ್ನಬೇಡಿ ಎನ್ನುತ್ತಾರೆ . ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯಲ್ಲಿ ಎಲ್ಲ ಒಳ್ಳೆಯ ಕೆಲಸವನ್ನೇ ಮಾಡಿ , ತಿಳಿದೋ , ತಿಳಿಯದೆಯೋ ಕೊನೆಯಲ್ಲಿ ಒಂದು ಒಂದೇ ಕೆಟ್ಟ ಕೆಲಸವನ್ನು ಮಾಡಿದರೂ ಸಾಕು .
ಅವನು ಅಷ್ಟರವರೆಗೆ ಮಾಡಿದ ಎಲ್ಲ ಒಳ್ಳೆಯ ಕೆಲಸಗಳನ್ನು ಮರೆತು , ಅವನು ಕೊನೆವರೆಗೂ ಮಾಡಿದ ಕೆಟ್ಟ ಕೆಲಸವನ್ನೇ ಎಲ್ಲೆಡೆ ಹೇಳುತ್ತಾರೆ .
ಎಲ್ಲ ಬಣ್ಣವನ್ನೂ ಮಸಿ ನುಂಗಿತ್ತು ಎಂಬ ಗಾದೆ ಕೂಡ ಇದನ್ನೇ ಹೇಳುತ್ತದೆ . ಚಿತ್ರವೊಂದಕ್ಕೆ ಎಲ್ಲ ಬಣ್ಣಗಳನ್ನು ಸಮನಾಗಿ ಬೆರೆಸಿ , ಹಚ್ಚಿ ನಂತರ ಅದರ ಮೇಲೆ ತಪ್ಪಿ ಬಿದ್ದ ಕಪ್ಪು ಬಣ್ಣವೊಂದು ಇಡೀ ಚಿತ್ರದ ಅಂದವನ್ನೇ ಹಾಳುಮಾಡುವಂತೆ , ಅಚಾನಕ್ ನಡೆದು ಹೋದ ಕೆಟ್ಟ ಕೆಲಸವೊಂದು ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ಮಾಡಿಬಿಡುತ್ತದೆ .
ಆದ್ದರಿಂದ ನಮ್ಮ ನಡೆ ನುಡಿ ಎಲ್ಲವೂ ಒಳ್ಳೆಯದಾಗಿರಬೇಕು ಎಂಬುದನ್ನು ಈ ಗಾದೆ ಹೇಳುತ್ತದೆ.

0 Comments