ಕತ್ತೆಗೆ ಲತ್ತೆ ಪೆಟ್ಟು , ಜಾಣರಿಗೆ ಮಾತಿನ ಪೆಟ್ಟು (Meaning /Explanation )in Kannada - Kannada gadegalu

 ಕತ್ತೆಗೆ ಲತ್ತೆ ಪೆಟ್ಟು , ಜಾಣರಿಗೆ ಮಾತಿನ ಪೆಟ್ಟು Kannada gadegalu Or a proverb (Meaning /Explanation ) in Kannada. Katthege latthe pettu janarige mathina pettu. 

ಕತ್ತೆಗೆ ಲತ್ತೆ ಪೆಟ್ಟು , ಜಾಣರಿಗೆ ಮಾತಿನ ಪೆಟ್ಟು (Meaning /Explanation )in Kannada - Kannada gadegalu

ಕತ್ತೆಗೆ ಲತ್ತೆ ಪೆಟ್ಟು , ಜಾಣರಿಗೆ ಮಾತಿನ ಪೆಟ್ಟು (Meaning /Explanation )in Kannada :

ಕತ್ತೆಗೆ ಲತ್ತೆ ಪೆಟ್ಟು , ಜಾಣರಿಗೆ ಮಾತಿನ ಪೆಟ್ಟು

ಕತ್ತೆ ದುಡಿಯುವ ಪ್ರಾಣಿ ಸಾಮಾನ್ಯವಾಗಿ ಅಗಸರು ಬಟ್ಟೆ ಹೊರೆಯನ್ನು ಅದರ ಮೇಲೆ ಹೇರಿ ನದಿವರೆಗೆ ಕೊಂಡೊಯ್ಯಲು ಬಳಸುತ್ತಾರೆ . ಕತ್ತೆಗೆ ದುಡಿತ , ಚಾಕರಿಯೊಂದೆ ಗೊತ್ತು . ದಿನಪೂರಾ ದುಡಿಯುತ್ತ , ಹೊಡೆತ ತಿನ್ನುತ್ತಾ ಕಾಲ ಕಳೆಯುತ್ತಿರುತ್ತದೆ . ಅದನ್ನು ಸಾಕಿದವನು ಅದರ ಕುರಿತು ಲಕ್ಷ ವಹಿಸುವುದಿಲ್ಲ , ಒದೆತ ತಿಂದ ಕತ್ತೆಗೆ ಅದು ಅಭ್ಯಾಸವಾಗಿ ಹೋಗಿರುತ್ತದೆ . ಹೊಡೆಯದೆ ಅದಕ್ಕೆ ಏನು ಕೆಲಸ ಹೇಳಿದರೂ ಅದಕ್ಕೆ ಗೊತ್ತೇ ಆಗುವುದಿಲ್ಲ , ಕತ್ತೆಗೆ ಬುದ್ದಿ ಕಡಿಮೆ .

ಸಾಕಿದವನು ಏನು ಕಲಿಸಿರುತ್ತಾನೋ ಅದು ಹಾಗೆ ನಡೆದುಕೊಳ್ಳುತ್ತದೆ . ಅದರ ಹೊರತಾಗಿ ಏನು ಯೋಚನೆ ಮಾಡುವುದೂ ಅದಕ್ಕೆ ಗೊತ್ತಿಲ್ಲ , ಬುದ್ದಿ ಇಲ್ಲದ ಜನರು ಹಾಗೆ ಏನನ್ನಾದರೂ ಮಾಡೋಣವೆಂದರೆ ಅವರಿಗೆ ಸ್ವಂತ ಬುದ್ಧಿ ಇರುವುದಿಲ್ಲ , ಬೇರೆಯವರು ಹೇಳಿದ್ದಷ್ಟನ್ನೇ ಮಾಡುತ್ತಾ ಹೋಗುತ್ತಾರೆ . ಅವರು ಮಾನ ಮರ್ಯಾದೆಗಳ ಬಗೆಗೆ ಚಿಂತಿಸ ಹೋಗುವುದಿಲ್ಲ .

ಅಂತವರಿಗೆ ದೊಣ್ಣೆ ಪೆಟ್ಟೆ ಸರಿ , ಆಗಲೇ ಅವರು ಸರಿಯಾಗಿ ಕೆಲಸ ಮಾಡುತ್ತಾರೆ . ಜಾಣರು ಹಾಗಲ್ಲ ಅವರು ವಿಚಾರವಂತರು , ಯಾರಾದರೂ ಏನಾದರೂ ಹೇಳಿದರೆ ಅದನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಬಲ್ಲರು . ನೀನು ಮಾಡುತ್ತಿರು ವುದು ತಪ್ಪು ಎಂದು ಒಂದು ಮಾತು ಹೇಳಿದರೆ ಸಾಕು . ಅದನ್ನು ಅರ್ಥಮಾಡಿ ಕೊಂಡು ಸರಿ ಮಾಡಿಕೊಳ್ಳುತ್ತಾರೆ . ಅದಕ್ಕಾಗಿ ಅವರಿಗೆ .

ಹೊಡೆಯುವ ಅಗತ್ಯವಿಲ್ಲ , ಅಂತೆಯೇ , ಜಾಣ ಮಕ್ಕಳಿಗೂ ಅಷ್ಟೇ ಒಂದೆರಡು ಮಾತು ಹೇಳಿದರೆ ಸಾಕಾಗುತ್ತವೆ , ತಿದ್ದುವ ಸಲುವಾಗಿ ಅವರಿಗೆ ಹೊಡೆಯುವ , ಬಡಿಯುವ ಅಗತ್ಯ ಬರುವುದಿಲ್ಲ ಎಂಬುದನ್ನು ಈ ಗಾದೆ ವಿವರಿಸುತ್ತದೆ .

Check out more Kannada gadegalu or proverb (Meaning /Explanation )in Kannada at kannadastories.in

Post a Comment

0 Comments