ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ (Meaning /Explanation )in Kannada - Kannada gadegalu

 ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ  Kannada gadegalu Or a proverb (Meaning /Explanation ) in Kannada. Jatti biddaru mise mannagalilla.

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ (Meaning /Explanation )in Kannada - Kannada gadegalu

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ (Meaning /Explanation )in Kannada :

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ 

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.

ಮನುಷ್ಯರ ತಮ್ಮ ನಡೆನುಡಿಗಳನ್ನು ಪರೀಕ್ಷಿಸಿಕೊಳ್ಳುತ್ತಾರೆ , ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ . ಯಾರಾದರೂ ನೀವು ಮಾಡಿದ್ದು ತಪ್ಪೆಂದು ಹೇಳಿದರೆ ಅದನ್ನು ತಿದ್ದಿಕೊಂಡು , ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ .

ಹಾಗಂತ ಈ ಸಮಾಜದಲ್ಲಿ ಸಭ್ಯರೊಂದೇ ಬದುಕುತ್ತಿಲ್ಲ . ಕೆಲವರು ಮೊಂಡು ಸ್ವಭಾವದರಿದ್ದಾರೆ . ಅವರು ಎಲ್ಲದಕ್ಕೂ ಅರ್ಥಹೀನವಾದ ವಾದ ಮಾಡುತ್ತಾರೆ . ಅವರು ಮಾಡಿದ ತಪ್ಪನ್ನು ನಾವು ಕಣ್ಣಾರೆ ನೋಡಿರುತ್ತೇವೆ .

ಆದರೆ ನಾವು ನೋಡಿದ್ದೆ ಸುಳ್ಳೆಂಬಂತೆ ತಾನು ಆ ತಪ್ಪನ್ನು ಮಾಡಿಲ್ಲವೆಂದು ವಾದಿಸುತ್ತಾರೆ . ಅವರ ಪ್ರಕಾರ ತಾನು ಸೋತನೆಂದರೆ ತನ್ನ ಮಯ್ಯಾದೆಗೆ ಕುಂದೆಂದು ಭಾವಿಸುತ್ತಾರೆ . ಮತ್ತೆ ಕೆಲವರು ಹಾಗಿರುವುದಿಲ್ಲ ,

ತಾನು ಸೋತರೂ ಅದನ್ನು ಒಪ್ಪಿಕೊಂಡು ಗೆದ್ದವರಿಗೆ ಅಭಿನಂದಿಸುತ್ತಾರೆ . ಇದು ಅವರ ಸಭ್ಯತೆಯನ್ನು ತೋರಿಸುತ್ತದೆ . ಇದರಿಂದ ಅವರ ಘನತೆ ಹೆಚ್ಚಾಗುತ್ತದೆ .

ಬದಲಾಗಿ ಸೋತಿದ್ದರೂ ನಾನೇ ಗೆದ್ದೆ ಎಂದು ವಾದಿಸಿದರೆ ಅವರೆಡೆಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಬರಲು ಸಾಧ್ಯವಿಲ್ಲವೆಂಬುದನ್ನು ಈ ಗಾದೆ ವಿವರಿಸುತ್ತದೆ.

Post a Comment

1 Comments