ತಾನುಂಟು ಮೂರು ಲೋಕವುಂಟು Kannada gadegalu Or a proverb (Meaning /Explanation ) in Kannada. Thanuntu mooru lokavuntu.
ತಾನುಂಟು ಮೂರು ಲೋಕವುಂಟು (Meaning /Explanation )in Kannada :
ತಾನುಂಟು ಮೂರು ಲೋಕವುಂಟು
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.
ಕೆಲವರ ಸ್ವಭಾವವೇ ಹಾಗೆ . ತಾವಾಯ್ತು , ತಮ್ಮ ಕೆಲಸವಾಯ್ತು ಎಂದು ಇದ್ದುಬಿಡುತ್ತಾರೆ . ಪ್ರಪಂಚದಲ್ಲಿ ಬೇಡ , ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂದು ಕೂಡ ಅವರಿಗೆ ಗೊತ್ತಿರುವುದಿಲ್ಲ ,
ಅವರಿಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಇರುತ್ತಾರೆ . ತಾನು ಇತರರಿಗೆ ನೆರವಾಗಬೇಕು , ಈ ದೇಶಕ್ಕಾಗಿ ಏನಾದರೂ ಮಾಡಬೇಕು ಇಂತಹ ಯಾವ ಆಲೋಚನೆಗಳು ಅವರಲ್ಲಿ ಇರುವುದಿಲ್ಲ ,
ತಾನು , ತನ್ನ ಹೆಂಡತಿ , ಮಗು ಎಂದು ಆರಾಮವಾಗಿ ಇರುತ್ತಾರೆ . ಹೊರತಾಗಿ ಬೇರ ಸಂಬಂಧಗಳ ಕುರಿತು ಯೋಚಿಸುವುದೇ ಇಲ್ಲ . ಅವರಿಗೆ ತಾವು ಚೆನ್ನಾಗಿದ್ದರೆ ಸಾಕು ಅಷ್ಟೇ . ಯಾರು ತೀರಿಕೊಂಡರೇನು ? ಯಾರು ನಿರ್ಗತಿಕರಾದರೇನು ? ಅಥವಾ ದೇಶವನ್ನೇ ಕೊಳ್ಳೆಹೊಡೆದರೇನು ?
ಅಂತಹ ಸಂಗತಿಗಳು ಅವರಿಗೆ ಬೇಕಾಗಿರುವುದೇ ಇಲ್ಲ . ತಾನುಂಟು , ತನ್ನ ಲೋಕವುಂಟು ಎಂದಿರುತ್ತಾರೆ .
ಇಂತವರನ್ನು ನೋಡಿ ಜನ ಆಡಿಕೊಳ್ಳುವುದು ಸಹಜ , ಸ್ವಾರ್ಥವಿರುವವರು ಇತರರ ಕುರಿತು ಯೋಚಿಸುವುದಿಲ್ಲ ಸ್ವಾರ್ಥದಿಂದಿರುವುದು ಮನುಷ್ಯನ ಗುಣವಲ್ಲ , ಬದಲಾಗಿ ಇರುವಷ್ಟು ದಿನ ತನ್ನ ಕೈಲಾದ ಸಹಾಯವನ್ನು ಮಾಡಬೇಕು.

0 Comments