ಗಾಳಿಯಲ್ಲಿ ಗೋಪುರ ಕಟ್ಟಿದಂತೆ (Meaning /Explanation )in Kannada - Kannada gadegalu

 ಗಾಳಿಯಲ್ಲಿ ಗೋಪುರ ಕಟ್ಟಿದಂತೆ Kannada gadegalu Or a proverb (Meaning /Explanation ) in Kannada. Galiyalli Gopura Kattidanthe.

ಗಾಳಿಯಲ್ಲಿ ಗೋಪುರ ಕಟ್ಟಿದಂತೆ (Meaning /Explanation )in Kannada - Kannada gadegalu

ಗಾಳಿಯಲ್ಲಿ ಗೋಪುರ ಕಟ್ಟಿದಂತೆ (Meaning /Explanation )in Kannada :

ಗಾಳಿಯಲ್ಲಿ ಗೋಪುರ ಕಟ್ಟಿದಂತೆ

ಯಾವ  ಮನುಷ್ಯನೇ ಆಗಲಿ ಭವಿಷ್ಯದ ಬಗ್ಗೆ ತಾನು ಕಟ್ಟಿಕೊಂಡ ಕನಸು ನನಸಾಗಿಬಿಡುತ್ತದೆ ಎಂದು ಭಾವಿಸಲಾಗದು ಆದರೆ ತಾನು ನಿರೀಕ್ಷಿಸಿದ ಹಾಗೂ ಯೋಜಿಸಿದ ಭವಿಷ್ಯ ನಿಜರೂಪ ತಾಳಲು ಶ್ರಮವಹಿಸಿ ದುಡಿಯಬೇಕು .

ಹಾಗೆ ನೋಡಿದರೆ ಅಂದುಕೊಂಡಿದ್ದೂ ಫಲಿಸದೆಯೇ ಹೋಗಬಹುದು ಅನಿರೀಕ್ಷಿತ ವಿಪರ್ಯಾಸಗಳಿಗೆ ಮನುಷ್ಯ ಸಿದ್ಧನಾಗಿಯೇ ಇರಬೇಕು ಕೆಲವರು ಆಶಾಗೋಪುರ ಕಟ್ಟುತ್ತಾರೆ .

 ಅದು ಸಾಧ್ಯವಾಗದೆ ಕುಸಿದು ಬಿದ್ದಾಗ ಪರಿತಪಿಸುತ್ತಾರೆ ಇಂಥವರು ಗಾಳಿಯಲ್ಲಿ ಗೋಪುರ ಕಟ್ಟಿದಂತೆಯೇ . ನಿವೇಶನವೇ ಖರೀದಿಸುವುದಿಲ್ಲ , ಭವ್ಯವಾದ ಮನೆ ಕಟ್ಟಿದ ಹಾಗೆ ಆಲೋಚಿಸುತ್ತಾರೆ .

ಪರೀಕ್ಷೆಗೆ ಓದಿಯೇ ಇರುವುದಿಲ್ಲ . ತನಗೆ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತದೆ ಎಂಬ ಆಶಾಸೌಧ ಕಟ್ಟಿಕೊಟ್ಟುತ್ತಾರೆ . ಅದಕ್ಕೆ ಬಲ್ಲವರು ಹೇಳುತ್ತಾರೆ .

ಗಾಳಿಯಲ್ಲಿ ಗೋಪುರ ಕಟ್ಟಲು ಹೋಗಬಾರದು . ಮೊಟ್ಟೆಗಳು ಮರಿಯಾಗುವ ಮೊದಲೇ ಮರಿಗಳನ್ನು ಎಣಿಸಲು ಹೋಗಬಾರದು ಎಂದು.

Suggested Kannada gadegalu :
Check out more Kannada gadegalu at kannadastories.in


Post a Comment

0 Comments