ಆನೆ ಸತ್ತರೂ ಸಾವಿರ ಇದ್ದರೂ ಸಾವಿರ (Meaning /Explanation )in Kannada - Kannada gadegalu

 ಆನೆ ಸತ್ತರೂ ಸಾವಿರ ಇದ್ದರೂ ಸಾವಿರ  Kannada gadegalu Or a proverb (Meaning /Explanation ) in Kannada. Aane Satharu Saavira, Eddaru Saavira.

ಆನೆ ಸತ್ತರೂ ಸಾವಿರ ಇದ್ದರೂ ಸಾವಿರ (Meaning /Explanation )in Kannada - Kannada gadegalu

ಆನೆ ಸತ್ತರೂ ಸಾವಿರ ಇದ್ದರೂ ಸಾವಿರ (Meaning /Explanation )in Kannada :

ಆನೆ ಸತ್ತರೂ ಸಾವಿರ ಇದ್ದರೂ ಸಾವಿರ 

ಕಾಡುಪ್ರಾಣಿಯಾದ ಆನೆಯನ್ನು ಮನುಷ್ಯ ಪಳಗಿಸಿ ಮರದ ದಿಮ್ಮಿಗಳನ್ನು ಉರುಳಿಸಲು , ಭಾರೀ ಗಾತ್ರದ ಉಪಕರಣಗಳನ್ನು ಸಾಗಿಸಲು ಉಪಯೋಗಿಸುತ್ತಾನೆ .

 ಅದೇ ಆನೆ ಸತ್ತ ಮೇಲೆ ಅದರ ದಂತದಿಂದ ಹತ್ತಾರು ಬಗೆಯ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ . ಹೀಗೆ ಆನೆ ಇದ್ದರೂ ಲೋಕೋಪಕಾರಿ .

ಗಾದೆಯನ್ನು ಇನ್ನಷ್ಟು ವಿಶ್ಲೇಷಿಸಿದಾಗ ತಿಳಿಯುವ ಅಂಶವೆಂದರೆ ಕೆಲವು ಮಹಾನ್ ವ್ಯಕ್ತಿಗಳು ಹಾಗೆ , ಅವರು ಬದುಕಿದ್ದಾಗ ಎಷ್ಟು ಮಹತ್ವದ ವ್ಯಕ್ತಿಗಳೆನಿಸಿಕೊಂಡು ಲೋಕೋಪಕಾರಿಗಳಾಗಿದ್ದರೋ , ಸತ್ತ ಬಳಿಕವೂ ಅವರ ಅಮೂಲ್ಯವಾದ ಆಚಾರ - ವಿಚಾರಗಳನ್ನು ಯಾರೂ ಮರೆಯುವುದಿಲ್ಲ

ಸ್ವಾಮಿವಿವೇಕಾನಂದ , ಮಹಾತ್ಮಾಗಾಂಧಿ ಮೊದಲಾದ ಮಹನೀಯರು ತಾವು ಬದುಕಿದ್ದಾಗ ಪೂಜ್ಯರಾಗಿ ಜಗತ್ತಿಗೇ ಮಾರ್ಗದರ್ಶಕರಾಗಿದ್ದರು . ಅವರು ಗತಿಸಿದ ಮೇಲೂ ಅವರು ಸಾರಿದ ತತ್ವಗಳು , ಜಗತ್ತಿಗೆ ನೆರವಾಗುತ್ತಿವೆ .

ಇವರಂತೆ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕೇವಲ ಇದ್ದಾಗಲಷ್ಟೇ ಅಲ್ಲ ಸತ್ತ ಮೇಲೂ ಜನ ಅವರನ್ನು ನೆನಪಿಸಿಕೊಳ್ಳುವಂತ ಮಹಾನ್ ಕಾರ್ಯಗಳನ್ನು ಸಾಧಿಸಬೇಕೆಂದು ಈ ಗಾದೆ ಹೇಳುತ್ತದೆ.

Check out more Kannada gadegalu at kannadastories.in

Post a Comment

0 Comments