ಕೊಡಲಿ ಕಾವು ಕುಲಕ್ಕೆ ಮೂಲ (Meaning /Explanation )in Kannada - Kannada gadegalu

 ಕೊಡಲಿ ಕಾವು ಕುಲಕ್ಕೆ ಮೂಲ  Kannada gadegalu Or a proverb (Meaning /Explanation ) in Kannada. Kodali kaavu kulakke mula.

ಕೊಡಲಿ ಕಾವು ಕುಲಕ್ಕೆ ಮೂಲ (Meaning /Explanation )in Kannada - Kannada gadegalu

ಕೊಡಲಿ ಕಾವು ಕುಲಕ್ಕೆ ಮೂಲ (Meaning /Explanation )in Kannada :

ಕೊಡಲಿ ಕಾವು ಕುಲಕ್ಕೆ ಮೂಲ 
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.

ಮರದ ಕಟ್ಟಿಗೆಯಿಂದಲೇ ಕೊಡಲಿಯ ಕಾವು ತಯಾರಿಸಲಾಗುತ್ತದೆ . ಆದರೆ ಮುಂದೆ ಅದು ನಿರ್ದಯವಾಗಿ ಇನ್ನಷ್ಟು ಗಿಡಮರಗಳನ್ನು ನೆಲಸಮ ಮಾಡುತ್ತದೆ .

ಅದರಂತೆ , ಒಳ್ಳೆಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಮುಂದ ಆಸ್ತಿ , ಹಣದ ಆಸೆಗಾಗಿ ತನ್ನ ವಂಶವನ್ನೇ ನಿರ್ನಾಮ ಮಾಡಿದ ಅದೆಷ್ಟೋ ಜನರಿದ್ದಾರೆ.

ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಈ ಮೇಲಿನ ಗಾದೆಗೆ ಪೂರಕವಾಗಿದೆ . ಒಡನಾಡಿ ಹುಟ್ಟುವಾಗ , ಜೊತೆಯಾಗಿ ಬೆಳೆಯುವಾಗ ಬಹಳ ಪ್ರೀತಿ ಯಿಂದಲೇ ಇರುತ್ತಾರೆ . ಆದರೆ ಬೆಳೆಯುತ್ತಾ ಹೋದ ಹಾಗೆ ಕೆಲವು ಕೆಟ್ಟ ಗುಣಗಳು ಮನುಷ್ಯನನ್ನು ಹಾಳುಮಾಡುತ್ತವೆ .

ತನ್ನ ಹೆತ್ತವರು ಒಡಹುಟ್ಟಿದವರೆಂಬ ಯಾವುದೇ ಭಾವನೆಗಳಿಲ್ಲದೆ ಎಲ್ಲರನ್ನೂ ನಾಶ ಮಾಡಲು ಮುಂದಾಗುತ್ತಾರೆ ಇದು ವಿಶ್ವಾಸ ದ್ರೋಹವಾಗಿದೆ ಯಾರೂ ಇಂತಹ ಕಾರ್ಯಕ್ಕೆ ಕೈ ಹಾಕದೆ ಮಾನವೀಯತೆಯಿಂದ ಬದುಕಬೇಕೆಂಬ ಸಂದೇಶವನ್ನಿದು ಸಾರುತ್ತದೆ.


 

Post a Comment

1 Comments

  1. This helped me in my project thanks ❤️❤️❤️ you all and also ❤️❤️❤️ from Karnataka

    ReplyDelete