ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು (Meaning /Explanation )in Kannada - Kannada gadegalu

 ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು Kannada gadegalu Or a proverb (Meaning /Explanation ) in Kannada. Prathyaksha Kandaru pramanisi Noodu.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು (Meaning /Explanation )in Kannada - Kannada gadegalu

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು (Meaning /Explanation )in Kannada :

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು

ಸಾಮಾನ್ಯವಾಗಿ ಎಲ್ಲರೂ ಕಣ್ಣಿಗೆ ಕಂಡಿದ್ದನ್ನು ನಂಬುತ್ತಾರೆ . ಹಾಗಂತ ಅದನ್ನೇ ನಂಬಿಕೊಂಡು ಯಾವುದೇ ನಿರ್ಧಾರಕ್ಕೂ ಬರಬಾರದು .

ಪ್ರತ್ಯಕ್ಷವಾಗಿ ಕಂಡಿದ್ದರೂ ಮತ್ತೊಮ್ಮೆ ಪ್ರಮಾಣಿಸಿ ನೋಡಬೇಕು ಎಂಬುದನ್ನು ಈ ಗಾದೆ ಹೇಳುತ್ತದೆ.

ರಾಜಮ್ಮ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ , ನೀರು ತರಲು ಹೋಗಿದ್ದಳು . ಮಲಗಿದ್ದ ಮಗುವನ್ನು ನೋಡಿಕೊಳ್ಳಲು ಸಾಕಿದ್ದ ಮುಂಗುಸಿಯನ್ನು ಬಿಟ್ಟಿದ್ದಳು . ಆಗ ಎಲ್ಲಿಂದಲೋ ಬಂದ ಹಾವೊಂದು ಮಗು ಮಲಗಿದ್ದ ತೊಟ್ಟಿಲ ಬಳಿ ಹೋಗುತ್ತಿದುದನ್ನು ಕಂಡ ಮುಂಗುಸಿ , ಹಾವಿಗೆ ಕಚ್ಚಿ ಅದನ್ನು ಸಾಯಿಸಿಬಿಟ್ಟಿತು .

ಮುಂಗುಸಿಯ ಬಾಯೆಲ್ಲ ರಕ್ತವಾಗಿತ್ತು. ಆ ತಕ್ಷಣಕ್ಕೆ ಬಂದ ರಾಜಮ್ಮ ಬಾಯಲ್ಲಿ ರಕ್ತವಿದ್ದ ಮುಂಗುಸಿಯನ್ನು ನೋಡಿ , ಮಗುವನ್ನು ಸಾಯಿಸಿಬಿಟ್ಟಿದೆ ಎಂದು ಭಾವಿಸಿ , ನೀರು ತುಂಬಿದ್ದ ಕೊಡವನ್ನು ಮುಂಗುಸಿಯ ಮೇಲೆ ಹಾಕಿ , ಒಳಗೆ ಓಡಿದಳು .

 ಅಲ್ಲಿ ನೋಡಿದರೆ ವಿಷಕಾರಿ ಹಾವು ಪಕ್ಕದಲ್ಲಿ ಸತ್ತು ಬಿದ್ದಿತ್ತು . ಮಗು ತೊಟ್ಟಿಲಲ್ಲಿ ಆರಾಮವಾಗಿ ನಿದ್ರಿಸುತ್ತಿತ್ತು . ಹೊರಗೆ ಬಂದು ನೋಡಿದರೆ ಮುಂಗುಸಿ ಸತ್ತು ಹೋಗಿತ್ತು .

ತಾನು ಅವಸರವಾಗಿ ಮಾಡಿದ ತಪ್ಪಿಗೆ ರಾಜಮ್ಮ ಜೋರಾಗಿ ಅತ್ತಳು . ಆದರೆ ಏನೂ ಪ್ರಯೋಜನವಾಗಲಿಲ್ಲ.

Post a Comment

1 Comments

  1. Youtube 2K is the future for Vimeo
    YouTube 2K, an app that youtube mp4 lets you access movies, TV shows and podcasts in your browser, is now available for android phones. youtube 2k 1

    ReplyDelete