ಹಲ್ಲು ಕಿತ್ತ ಹಾವು (Meaning /Explanation )in Kannada - Kannada gadegalu

 ಹಲ್ಲು ಕಿತ್ತ ಹಾವು Kannada gadegalu Or a proverb (Meaning /Explanation ) in Kannada. Hallu kitha haavu. 

ಹಲ್ಲು ಕಿತ್ತ ಹಾವು (Meaning /Explanation )in Kannada - Kannada gadegalu

ಹಲ್ಲು ಕಿತ್ತ ಹಾವು (Meaning /Explanation )in Kannada :

ಹಲ್ಲು ಕಿತ್ತ ಹಾವು 

ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು . ಗಾದೆಗಳು ನಮ್ಮ ಬಾಳಿಗೆ ಮಾರ್ಗದರ್ಶನ ನೀಡಿ ನಮ್ಮ ಬಾಳನ್ನು ಹಸನು ಗೊಳಿಸುತ್ತವೆ. ಅಂತಹ ಅಮೂಲ್ಯವಾದ ಗಾದೆ ಮಾತುಗಳಲ್ಲಿ ಮೇಲಿನ ಗಾದೆಯೂ ಒಂದಾಗಿದೆ.

Example 1 : ಹಾವೆಂದರೆ ಎಲ್ಲರಿಗೂ ಭಯವೇ . ಆದರೆ ಹಾವಿನ ವಿಷದ ಹಲ್ಲನ್ನು ಕಿತ್ತುಬಿಟ್ಟರೆ ಭಯವಿರುವುದಿಲ್ಲ , ಹಾವಾಡಿಗರು ಹಾವನ್ನು ಹಿಡಿದ ತಕ್ಷಣ ವಿಷದ ಹಲ್ಲನ್ನು ಕಿತ್ತುಬಿಡುತ್ತಾರೆ .

ಆದ್ದರಿಂದ ಅವರು ನಿರಾತಂಕವಾಗಿ ಅದನ್ನು ಆಡಿಸುತ್ತಾರೆ . ಈ ಗಾದೆ ಮನುಷ್ಯರ ಸ್ವಭಾವವನ್ನು ಕುರಿತು ಹೇಳುತ್ತದೆ .

ಮನುಷ್ಯ ಅಧಿಕಾರದಲ್ಲಿದ್ದಾಗ ಅವನ ಕೈ ಕೆಳಗೆ ಜನ ಹೆದರಿಕೊಂಡು ತಗ್ಗಿ ಬಗ್ಗಿ ನಡೆಯುತ್ತಾರೆ . ವಿಷವುಳ್ಳ ಹಾವಿನಂತೆ ಅಧಿಕಾರದಲ್ಲಿರುವವರು ಅಧಿಕಾರ ಚಲಾಯಿಸುತ್ತಾರೆ !

ಅದೇ ಅಧಿಕಾರ ಕಳೆದುಕೊಂಡು ನಿವೃತ್ತರಾದರೋ ಅವರ ಆಟ ಏನೂ ನಡೆಯುವುದಿಲ್ಲ , ಆಗ ಅಂಥವರಿಗೆ ಯಾರೂ ಮಹತ್ವ ಕೊಡುವುದಿಲ್ಲ , ಆದರೂ ಹಳೆಯ ಅಟಾಟೋಪಗಳನ್ನು ಪ್ರದರ್ಶಿಸಿದರೆ

ಜನ ಅವನೊಂದು ಹಲ್ಲು ಕಿತ್ತ ಹಾವು ಎಂದು ನಿರ್ಲಕ್ಷಿಸುತ್ತಾರೆ . ಮನುಷ್ಯ ಅಧಿಕಾರದಲ್ಲಿದ್ದಾಗಲೂ , ಅಧಿಕಾರ ಕಳೆದುಕೊಂಡ ಮೇಲೂ ಅಹಂಕಾರ ಪ್ರದರ್ಶಿಸದೆ ವಿನಯವಂತನಾಗಿದ್ದರೆ ಎಲ್ಲರಿಗೂ ಬೇಕಾದವನಾಗಿರುತ್ತಾನೆ.

Example :2 ಹಾವು ಎಂದರೆ ಎಲ್ಲರಿಗೂ ಭಯವೇ ,ಹಾವು ಕಚ್ಚಿದರೆ ವಿಷ , ಅದರಿಂದಾಗಿ ಸಾಯುತ್ತೇವೆ ಎಂಬ ಭಯದಿಂದ ಅದರಿಂದ ದೂರ ಉಳಿಯುತ್ತೇವೆ . ಹಾವಿಗೆ . ಹಲ್ಲಿನಲ್ಲಿ ವಿಷ ತುಂಬಿರುತ್ತದೆ.

 ಆದರೆ ಆ ಹಲ್ಲನ್ನು ಕಿತ್ತುಬಿಟ್ಟರೆ ಹಾವಿನ ಭಯವಿರುವುದಿಲ್ಲ , ಹಾವಾಡಿಗರು ಹಾವನ್ನು ಹಿಡಿದ ತಕ್ಷಣ ಅದರ ಹಲ್ಲನ್ನು ಕಿತ್ತುಬಿಡುತ್ತಾರೆ . ಆದ್ದರಿಂದ ಅವರು ನಿರಾತಂಕವಾಗಿ ಅದನ್ನು ಮನೆಗಳಿಗೆ ತಂದು ಆಡಿಸುತ್ತಾರೆ .

ಈ ಗಾದೆ ಮನುಷ್ಯನ ಸ್ವಭಾವದ ಕುರಿತು ಹೇಳುತ್ತದೆ . ಮನುಷ್ಯ ಅಧಿಕಾರದಲ್ಲಿದ್ದಾಗ , ಜನ ಹೆದರಿಕೊಂಡು ಅವನ ಕೈ ಕೆಳಗೆ ತಗ್ಗಿ ಬಗ್ಗಿ ನಡೆಯುತ್ತಾರೆ . ವಿಷವುಳ್ಳ ಹಾವಿನಂತೆ ಅಧಿ ಕಾರದಲ್ಲಿರುವವರು ಆಟಾಟೋಪ ಮಾಡುತ್ತಾರೆ . ಅದೇ ಒಮ್ಮೆ ಅಧಿಕಾರ ಕಳೆದುಕೊಂಡರೆ ಅಥವಾ ನಿವೃತ್ತರಾದರೆ ಅವರ ಆಟ ಏನೂ ನಡೆಯುವುದಿಲ್ಲ ,

ಆಗ ಅಂಥವರಿಗೆ ಯಾರೂ ಮಹತ್ವ ಕೊಡುವುದಿಲ್ಲ . ಆದಾಗ್ಯೂ ಅವರೇನಾದರೂ ತಾನೂ ಅಧಿ ಕಾರದಲ್ಲಿದ್ದವನೆಂದು ಮದ ತೋರಿಸಿದರೆ ಜನ , ಅವನೊಂದು ಹಲ್ಲು ಕಿತ್ತ ಹಾವು ಎಂದು ಹಿಯಾಳಿಸುತ್ತಾರೆ . ಆದ್ದರಿಂದ ಅಧಿ ಕಾರವಿರಲಿ , ಇಲ್ಲದಿರಲಿ ಮನುಷ್ಯ ವಿನಯವಂತನಾಗಿರಬೇಕು .

Post a Comment

0 Comments