ಇರುಳು ಕಂಡ ಬಾವೀಲಿ ಹಗಲು ಬಿದ್ದಂತೆ Kannada gadegalu or proverb Explanation and meaning in Kannada. Erulu Kanda Bhavili hagalu bidanthe.
ಇರುಳು ಕಂಡ ಬಾವೀಲಿ ಹಗಲು ಬಿದ್ದಂತೆ (Meaning /Explanation )in Kannada :
ಇರುಳು ಕಂಡ ಬಾವೀಲಿ ಹಗಲು ಬಿದ್ದಂತೆ
ರಾತ್ರಿ ಹೊತ್ತು ರಸ್ತೆಯಲ್ಲಿ ನಡೆದು ಹೋಗುತ್ತಿರಬೇಕಾದರೆ ಅದೇ ದಾರಿಯ ಮಧ್ಯದಲ್ಲಿರುವ ಬಾವಿಯಲ್ಲಿ ಬಿದ್ದುಬಿಟ್ಟರೆ ಕತ್ತಲು ಕಾಣಿಸಲಿಲ್ಲ ಅಥವಾ ಕಣ್ಣೆ ಕಾಣಿಸುವುದಿಲ್ಲವೆನ್ನಬಹುದು ಅಥವಾ ಗೊತ್ತೇ ಆಗಲಿಲ್ಲವೆನ್ನಬಹುದು . ಅದೇ ರಾತ್ರಿ ಕಾಣಿಸಿದ್ದ ಬಾವಿಯಲ್ಲಿ ಹಗಲು ಬಿದ್ದರೆ ? ಗೊತ್ತಿದ್ದು ತಪ್ಪು ಮಾಡಿದಂತಾಗುತ್ತದೆ . ತಿಳಿದೂ ತಿಳಿದೂ ತಪ್ಪು ಮಾಡುವವರಿಗೆ ಈ ಗಾದೆ ಮಾತನ್ನು ಹೇಳುವ ರೂಢಿಯಿದೆ . ಅಂದರೆ ಅದು ತಪ್ಪೆಂದು ಗೊತ್ತಿದ್ದು ಅದನ್ನೇ ಮಾಡುತ್ತಾರೆ .
ಮದ್ಯಪಾನ ಮಾಡುವುದು ಧೂಮಪಾನ ಮಾಡುವುದು ತಪ್ಪೆಂದು ಗೊತ್ತಿದ್ದು ಮಾಡುತ್ತಾರೆ . ಅದರಿಂದ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗುತೇವೆಂದು ಗೊತ್ತಿದ್ದರೂ ಅಂತಹ ಚಟಗಳನ್ನು ಬಯಸಿ ಬಯಸಿ ಕಲಿಯುತ್ತೇವೆ . ಇದು ಸರಿಯಲ್ಲ , ನಾವು ನಡೆಯುತ್ತಿರುವ ದಾರಿ ಸರಿಯಿಲ್ಲವೆಂದು ಗೊತ್ತಾದ ಮೇಲಾದರೂ ತಿದ್ದಿಕೊಂಡು ನಡೆಯಬೇಕು . ಅದನ್ನು ಬಿಟ್ಟು ಅಜಾರೂಕತೆಯಿಂದ ಸ್ವಯಂಪ್ರೇರಿತರಾಗಿ ತೊಂದರೆಗಳನ್ನು ಮೈಮೇಲೆ ಎಳೆದು ಕೊಳ್ಳುವುದು ಸರಿಯಲ್ಲವೆಂಬ ಸಂದೇಶ ವನ್ನು ಈ ಗಾದೆ ಸಾರುತ್ತದೆ.

Check out more Kannada gadegalu in kannadastories.in
3 Comments
Super and satya
ReplyDeleteThanks for the explanation
ReplyDeleteThanks for giving this
ReplyDelete