ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ? (Meaning /Explanation )in Kannada - Kannada gadegalu

  ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?   Kannada gadegalu Or a proverb (Meaning /Explanation ) in Kannada. Angie hunnige Kannadi beke ?

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?  (Meaning /Explanation )in Kannada


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?  (Meaning /Explanation )in Kannada 

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?

ನಿತ್ಯ ಜೀವನದಲ್ಲಿ ನಾವು ಅನೇಕ ತಪ್ಪುಗಳನ್ನು ಮಾಡುತ್ತೇವೆ . ಅದರಲ್ಲಿ ಕೆಲವು ನಮಗೆ ಗೊತ್ತಿಲ್ಲದೇ ಆಗುತ್ತದೆ . ಅದನ್ನು ಬೇರೆಯವರು ನಮಗೆ ಹೇಳಿದಾಗ ನಮ್ಮರಿವಿಗೆ ಬರುತ್ತದೆ . ಆಗ ತಿದ್ದಿಕೊಳ್ಳುತ್ತೇವೆ .

ಇನ್ನು ಕೆಲವೊಂದಿಷ್ಟು ತಪ್ಪುಗಳು ನಮ್ಮರಿವಿಗೆ ಬಂದಿರುತ್ತವೆ . ನಾವು ತಪ್ಪು ಮಾಡಿಬಿಟ್ಟೆವು ಅಥವಾ ನಾವು ಮಾಡುತ್ತಿರುವುದು ತಪ್ಪೆಂಬುದು ನಮಗೆ ತಿಳಿಯುತ್ತದೆ . ಹೀಗೆ ಗೊತ್ತಾದ ಮೇಲೆ ಅದನ್ನು ತಿದ್ದಿಕೊಳ್ಳಬೇಕು . ಅದನ್ನು  ಯಾರೂ ಹೇಳುವ ಅಗತ್ಯವಿರುವುದಿಲ್ಲ .

ಕಾರಣ , ಅಂಗೈಯಲ್ಲಾದ ಹುಣ್ಣು ಕಣ್ಣಿಗೆ ಕಾಣುವಂತೆ ನಮ್ಮ ತಪ್ಪುಗಳು ನಮಗೆ ಕಾಣುತ್ತವೆ . ತಪ್ಪಂತೂ ಆಗಿ ಹೋಗಿರುತ್ತದೆ . ಆದರೆ ಇನ್ನೊಮ್ಮೆ ಆ ತಪ್ಪು ಮರುಕಳಿಸದಂತೆ ತಿದ್ದಿಕೊಂಡು ನಡೆಯಬೇಕಾದಂತ ಜವಾಬ್ದಾರಿ ನಮ್ಮ ಮೇಲಿರುತ್ತದೆ .

ಕಣ್ಣೆದುರೇ ಕಾಣುತ್ತಿರುವ ತಪ್ಪುಗಳನ್ನು ತೋರಿಸಲು ಯಾರು ಬೇಕು ? ಅವು ನಮಗೆ ತಿಳಿಯದೆ ? ಒಂದು ವೇಳೆ ನಾವು ತಿಳಿದು ತಿಳಿಯದಂತೆ ವರ್ತಿಸಿದರೆ ಉಳಿದವರು ಈ ಗಾದೆ ಹೇಳಿ ಆಡಿಕೊಳ್ಳುತ್ತಾರೆ .

Check out more Kannada gadegalu at Kannadastories.in

Check out more Kannada gadegalu :

Post a Comment

1 Comments

  1. ವೆರಿ ನೈಸ್
    ಗಾದೆ

    ReplyDelete