ಗಾಳಿ ಬಂದಾಗ ತೂರಿಕೋ (Meaning /Explanation )in Kannada - Kannada gadegalu

 ಗಾಳಿ ಬಂದಾಗ ತೂರಿಕೋ  Kannada gadegalu Or a proverb (Meaning /Explanation ) in Kannada. Gaali bandaga thurikoo.

ಗಾಳಿ ಬಂದಾಗ ತೂರಿಕೋ (Meaning /Explanation )in Kannada - Kannada gadegalu

ಗಾಳಿ ಬಂದಾಗ ತೂರಿಕೋ (Meaning /Explanation )in Kannada :

ಗಾಳಿ ಬಂದಾಗ ತೂರಿಕೋ

ಯಾರೇ ಆಗಲಿ ಅವಕಾಶಗಳಿಗಾಗಿ ಕಾಯುತ್ತಾ ಕೂರದೆ ಬಂದ ಅವಕಾಶಗಳನ್ನು ಬಳಸಿಕೊಂಡು ತನ್ನ ಕೆಲಸವನ್ನು ಮಾಡಿಕೊಳ್ಳಬೇಕೆಂಬ ಅರ್ಥವನ್ನು ಈ ಗಾದೆ ಒಳಗೊಂಡಿದೆ .

ಪಾಪ ನಿರುದ್ಯೋಗಿಯಾಗಿದ್ದಾನೆಂದು ಯಾವ ಕೆಲಸವೂ ಅವನನ್ನು ಹುಡುಕಿ ಬರುವುದಿಲ್ಲ , ಬದಲಾಗಿ ಅವನೇ ಕೆಲಸ ಹುಡುಕಿಕೊಂಡು ಹೋಗಬೇಕು . ಸಿಕ್ಕ ಕೆಲಸಗಳಿಗೆಲ್ಲ ಇದು ಓದಿಗೆ ತಕ್ಕ ಕೆಲಸವಲ್ಲ , ಸಂಬಳ ಕಡಿಮೆ ಎಂದೆಲ್ಲ ಸಬೂಬು ಹೇಳುತ್ತಾ ಕುಳಿತರೆ , ಬೇರೊಬ್ಬರು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ .

ಯಾವ ವ್ಯಕ್ತಿಯೇ ಆಗಲಿ ಪ್ರಯತ್ನಗಳನ್ನು ಮಾಡುತ್ತಾ , ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳುತ್ತಾ ಹೋದಂತೆ ಯಶಸ್ಸು ಲಭಿಸುತ್ತದೆ .

ಒಮ್ಮೆ ಕಳೆದುಕೊಂಡ ಅವಕಾಶ ಮತ್ತೆ ಸಿಗುವುದಿಲ್ಲ , ಆದ್ದರಿಂದ ಮುಂದಾಲೋಚನೆಯಿಂದ ವ್ಯಕ್ತಿ ತನಗೆ ಸಿಕ್ಕ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು.

Check out more Kannada gadegalu at kannadastories.in

Post a Comment

2 Comments