ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ Kannada gadegalu Or a proverb (Meaning /Explanation ) in Kannada. Benki bidda mele Bhavi thodidananthe.
ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ (Meaning /Explanation )in Kannada :
ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ
ಮುಂಜಾಗೃತೆ ವಹಿಸದೆ , ಅನಾಹುತಕ್ಕೀಡಾಗುವ ಪರಿಸ್ಥಿತಿಯನ್ನು ಈ ಗಾದೆ ಬಹಳ ಸುಂದರವಾಗಿ ವಿವರಿಸುತ್ತದೆ .
ಮನೆಗೆ ಬೆಂಕಿ ಬಿದ್ದ ಮೇಲೆ , ಅಯ್ಯೋ ನೀರು ಹಾಕಿದರೆ ಬೆಂಕಿ ಆರಿಸಬಹುದಿತ್ತು ಎಂದು ಆಗ ಬಾವಿ ತೋಡಲು ಹೊರಟರೆ ಮನೆ ಸುಟ್ಟು ಬೂದಿಯಾಗಿಬಿಡುತ್ತದೆ .
ಇದರ ಅಂತರಾರ್ಥವೇನೆಂದರೆ ಯಾವುದೇ ಸಮಸ್ಯೆ ಎದುರಾದಾಗ ಅದರ ಪರಿಹಾರದತ್ತ ಆಲೋಚಿಸುತ್ತಾ ಕುಳಿತರೆ ಆಗದು . ಬದಲಾಗಿ ಸಮಸ್ಯೆಗೆ ಪರಿಹಾರವೇನೆಂಬುದನ್ನು ಮೊದಲೇ ತಿಳಿದಿರಬೇಕು .
ಅದೇ ರೀತಿ ಕೆಲವು ಮಕ್ಕಳು ಪರೀಕ್ಷೆಗೆ ಇನ್ನು ಸಾಕಷ್ಟು ಸಮಯವಿದೆ ಎಂದು ಓದಲು ಮನಸ್ಸು ಮಾಡುವುದೇ ಇಲ್ಲ . ಹಿಂದಿನ ದಿನ ಓದಿದರೆ ಸಾಕೆಂದು ಭಾವಿಸುತ್ತಾರೆ . ಆದರೆ ಪರೀಕ್ಷೆ ಆರಂಭವಾಗುವವರೆಗೂ ಅವರಿಗೆ ಓದಿ ಆಗುವುದೇ ಇಲ್ಲ .
ಅದರಿಂದ ಒತ್ತಡ ಉಂಟಾಗುತ್ತದೆ . ಪರೀಕ್ಷೆಯನ್ನೂ ಉತ್ತಮವಾಗಿ ಬರೆಯಲಾಗದೇ , ಕಡಿಮೆ ಅಂಕ ಪಡೆಯಬೇಕಾಗುತ್ತದೆ . ಕಡಿಮೆ ಅಂಕ ಬಂತೆಂದು ಆಗ ಬೇಸರಿಸಿಕೊಳ್ಳುವ ಬದಲು , ಮೊದಲೇ ಉತ್ತಮವಾಗಿ ಓದಿಬಿಟ್ಟಿದ್ದರೆ ಈ ಸಮಸ್ಯೆ ಎದುರಾಗುವುದೇ ಇಲ್ಲವೆಂಬುದನ್ನು ಈ ಗಾದೆ ಅರ್ಥೈಸುತ್ತದೆ.

0 Comments