ದುರದೃಷ್ಟಗಳು ಒಂಟಿಯಾಗಿ ಬರುವುದಿಲ್ಲ (Meaning /Explanation )in Kannada - Kannada gadegalu

 ದುರದೃಷ್ಟಗಳು ಒಂಟಿಯಾಗಿ ಬರುವುದಿಲ್ಲ  Kannada gadegalu Or a proverb (Meaning /Explanation ) in Kannada. Dhuradrustagalu onriyagi baruvudilla. 

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ Kannada gadegalu Or a proverb (Meaning /Explanation ) in Kannada.

ದುರದೃಷ್ಟಗಳು ಒಂಟಿಯಾಗಿ ಬರುವುದಿಲ್ಲ (Meaning /Explanation )in Kannada :

ದುರದೃಷ್ಟಗಳು ಒಂಟಿಯಾಗಿ ಬರುವುದಿಲ್ಲ

ಜೀವನದಲ್ಲಿ ಸುಖ , ಕಷ್ಟಗಳೆರಡು ಸಾಮಾನ್ಯ . ಸದಾ ಸುಖವಾಗಿ ಇರಲಾಗುವುದಿಲ್ಲ . ಹಾಗಂತ ಯಾವಾಗಲೂ ಕಷ್ಟವೇ ಇರುವುದಿಲ್ಲ , ಕಷ್ಟ ಗಳು ಬರುತ್ತವೆ , ಹೋಗುತ್ತವೆ .

ಆದರೆ ಬರುವಾಗ ಕಷ್ಟಗಳು ಒಟೊಟ್ಟಿಗೆ ಬರುತ್ತವೆ ಎಂಬುದು ಸಾಮಾನ್ಯ ನಂಬಿಕೆ . ಉದಾಹರಣೆಗೆ ಯಾವುದೋ ಕಾರಣಕ್ಕೆ ಕೂಡಿಟ್ಟ ಹಣವನ್ನೆಲ್ಲ ಖರ್ಚು ಮಾಡಿರುತ್ತೀರಿ . ಕೈಯ್ಯಲ್ಲಿ ಕಾಸು ಇರದಿರುವಾಗಲೇ ಆರೋಗ್ಯ ಸಮಸ್ಯೆ ತಲೆದೋರುತ್ತದೆ .

ಸಾಮಾನ್ಯ ಶೀತವಷ್ಟೇ , ಅದಕ್ಕೇಕೆ ಆಸ್ಪತ್ರೆಗೆ ಹೋಗುವುದು ವೃಥಾ ಖರ್ಚು ಎಂದು ಭಾವಿಸುತ್ತೀರಿ , ಆದರೆ ಅದು ಅಷ್ಟಕ್ಕೆ ಹೋಗುವುದಿಲ್ಲ ಅದರ ಚಿಕಿತ್ಸೆಗಾಗಿ ಮತ್ತೆ ಸಾಲ ಮಾಡಬೇಕಾಗುತ್ತದೆ . ಅದನ್ನು ತೀರಿಸಲು ಪರದಾಡಬೇಕಾಗುತ್ತದೆ .

ಇದನ್ನೇ ಕಷ್ಟಗಳ ಸರಮಾಲೆ ಎನ್ನುತ್ತಾರೆ ಬಲ್ಲವರು . ಇದು ಏಕೆ ಹೀಗೆ ಎಂಬುದಕ್ಕೆ ಯಾವುದೇ ನಿಯಮವಿಲ್ಲ . ಕೆಲವೊಮ್ಮೆ ನಮ್ಮ ಮನಸ್ಥಿತಿಯೂ ಹಾಗೆ ಆಗಿಹೋಗುತ್ತದೆ . ತಪ್ಪಾಗಿ ತೆಗೆದುಕೊಳ್ಳುವ ಒಂದು ನಿರ್ಧಾರದಿಂದಾಗಿ , ಮತ್ತೊಂದಿಷ್ಟು ದುರದೃಷ್ಟಗಳನ್ನು ಬರಮಾಡಿಕೊಂಡಂತಾಗುತ್ತದೆ .

ಆದ್ದರಿಂದ ಮನುಷ್ಯ ಯಾವುದನ್ನೂ ಸಾರಾಸಗಟಾಗಿ ತೆಗೆದುಕೊಳ್ಳದೇ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು . ಆಗ ಮಾತ್ರ ಯಾವುದು ಕಷ್ಟ , ಯಾವುದು ಸುಖ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ .

Check out more Kannada gadegalu at Kannadastories.in

Post a Comment

0 Comments